ರಾಜ್ಯದಲ್ಲಿ ನಡೆದ ೫ ಕ್ಷೇತ್ರದ ಮಿನಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸೋಲು ಉಂಡಿದೆ. ಭಾರತಿಯ ಜನತಾ ಪಾರ್ಟಿ ಆಪರೇಶನ್ ಕಮಲಕ್ಕೆ ಕತ್ತರಿ ಬೀಳುವ ಫಲಿತಾಂಶ ಹೊರ ಬಂದಿದೆ. ಅದರಲ್ಲಿ ಪಕ್ಷ ತೊರೆದು ಬಿ.ಜಿ.ಪಿ ಗೆ ಸೇರ್ಪಡೆಗೊಂಡಿದ್ದ ಸಿ.ಪಿ.ಯೋಗಿಶ್ವರ ಮತ್ತು ವಿ.ಸೋಮಣ್ಣ ಸೋಲು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.
ಜೆ.ಡಿ.ಎಸ್ ಮತ್ತೆ ಬೀಗುತ್ತಿದೆ ಚನ್ನಪಟ್ಟಣ ಮತ್ತು ರಾಮನಗರವನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ. ಮುಂಬರುವ ಬಿ.ಬಿ.ಎಂ.ಪಿ ಮಹಾಸಮರದಲ್ಲಿ ದೇವೇಗೌಡರು ಹುಮ್ಮಸಿನಿಂದ ತಯಾರಾಗಿದ್ದಾರೆ.
ಕಾಂಗ್ರೆಸ್ ಸೋಲಿನ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಉಪಚುನಾವಣೆಯಲ್ಲಿ ಕೇವಲ ಒಂದು ಸ್ಥಾನಗಳಿಸಿದ್ದು ನಾಯಕರನ್ನು ತಲೆಗೆಡಿಸಿದೆ. ಕೇಂದ್ರ ಸಚಿವರ ಮಗನ ಸೋಲು ಖರ್ಗೆ ಹಾಗು ನಾಯಕರಿಗೆ ದಿಲ್ಲಿ ಮೇಡಂ ಮುಂದೆ ತಲೆತಗ್ಗಿಸುವಂತಾಗಿದೆ.
ಚಿತ್ತಾಪುರದಲ್ಲಿ ವಾಲ್ಮೀಕಿ ನಾಯಕ್ ಗೆಲವು ಬಿ.ಜೆ.ಪಿ ಯಲ್ಲಿ ಹರ್ಷ ತಂದಿದೆ. ಕಾಂಗ್ರೆಸ್ ಹಿಡಿತದಲ್ಲಿ ಇದ್ದ ಕ್ಷೇತ್ರವನ್ನು ಕಸಿದಿಕೊಂಡಿದೆ. ಇದಕ್ಕೆ ಚುನಾವಣೆಯ ಹೊರೆಯನ್ನು ಹೊತ್ತಿಕೊಂಡಿದ್ದ ಸಚಿವ ಉದಾಸಿ ಹಾಗು ಬಸವರಾಜ ಬೊಮ್ಮಾಯಿ ಶ್ರಮ ಕೂಡಾ ಮಹತ್ವದ್ದಾಗಿದೆ. ಈಗಾಗಲೇ ಅಭ್ಯರ್ಥಿಗೆ ಹಾಗು ಸಚಿವರಿಗೆ ಅಭಿನಂದನೆಗಳ ಮಹಾಪುರಹರಿದು ಬಂದಿದೆ. ಇದೀಗ ಪಕ್ಷವು ಬಿ.ಬಿ.ಎಂ.ಪಿ ಚುನಾವಣೆಯ ಮೇಲೆ ಕಣ್ಣಿಟ್ಟಿದೆ.
ಸೋಲಿನ ರುಚಿ ಉಂಡು ಸುಸ್ತಾಗಿರುವ ಕಾಂಗ್ರೆಸ್, ಹರೆಯು ಮರಳಿ ಬಂದಂತೆ ತಯಾರಾಗಿರುವ ಜೆ.ಡಿ.ಎಸ್, ಆಪರೇಶನ್ ಕಮಲದಿಂದ ಉಂಟಾದ ಕಲಹಗಳು ಬಿ.ಬಿ.ಎಂ.ಪಿ ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುವುದನ್ನು ಕಾಡು ನೋಡಬೇಕಾಗಿದೆ.