Wednesday, March 17, 2010

ಎಲ್ಲರ ಚಿತ್ತ ಬಿ.ಬಿ.ಎಂ.ಪಿ ಅತ್ತ !!!



ಬಿ.ಬಿ.ಎಂ.ಪಿ ಚುನಾವಣೆ ಎಂದರೆ ರಾಜ್ಯದ ವಿಧಾನಸಭೆ ಚುನಾವಣೆ ಎಂದು ಹೇಳಬಹುದು. ೧೯೮ ವಾರ್ಡಗಳಲ್ಲಿಚುನಾವಣೆ ಎಂದರೆ ಅದೇನು ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್, ಜಿಲ್ಲ ಪಂಚಾಯತ್ ಚುನಾವಣೆ ನಡೆಸಿದಂತೆ ನಡೆಸುವುದಲ್ಲ ಇಲ್ಲಿಯ ವಾರ್ಡಗಳು ಲಕ್ಷಕ್ಕಿಂತ ಅಧಿಕ ಮತದಾರನ್ನು ಹೊಂದಿವೆ. ಇಂತಹ ಸಂಧರ್ಭದಲ್ಲಿ ಚುನಾವಣೆ ನಡೆಸುವುದು ಏನು ಸಣ್ಣ ವಿಷಯವೇನು ಅಲ್ಲ.
ಭಾರತದ ಹೆಮ್ಮೆಯ ನಗರವಾದ ಬೆಂಗಳೂರು ಸುಮಾರು 500ವರ್ಷಗಳಷ್ಟು ಹಳೆಯದಾಗಿದ್ದು,ಸಣ್ಣ ಜನ ಪ್ರದೇಶದಿಂದ,ಬೆಂಗಳೂರಿನ ಸ್ಥಾಪಕನಾದ ಕೆಂಪೇಗೌಡನ ಮಗನು 1537ರಲ್ಲಿ ನಾಲ್ಕು ಕಾವಲುಗೋಪುರಗಳನ್ನು ಸ್ಥಾಪಿಸುವ ಮೂಲಕ ನಗರ ಅಂಚುಗಳನ್ನು ಗುರುತಿಸಲು ಒಂದು ಮಣ್ಣಿನ ಕೋಟೆಯನ್ನು ಕಟ್ಟಿಸುವವರೆಗೆ ಹಂತಹಂತವಾಗಿ ಬೆಳೆದು ಬಂದಿದೆ. ಆದರೆ ಇಂದು ಬೆಂಗಳೂರು ಆ ನಾಲ್ಕು ಗೋಪುರಗಳನ್ನು ದಾಟಿ ಬೆಳೆದಿದ್ದು,6 ದಶಲಕ್ಷ ಜನರ ಬೃಹತ್ ಮಹಾನಗರವಾಗಿದೆ. ಭಾರತದ ಶೇಕಡ 35ಕ್ಕಿಂತ ಹೆಚ್ಚು ಸಾಫ್ಟವೇರ್ ರಫ್ತಿಗೆ ಕಾರಣವಾಗಿರುವ ಇದು ಭಾರತದ ಸಿಲಿಕಾನ್ ಕಣಿವೆಯಾಗಿದೆ.ಬೆಂಗಳೂರಿನ ಹಿತಕರ ಹವಾಮಾನ,ಅತ್ಯುತ್ಕ್ರುಷ್ಟ ದರ್ಜೆಯ ಶೈಕ್ಷಣಿಕ,ವೈಜ್ಞಾನಿಕ ಹಾಗೂ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಇವುಗಳೊಂದಿಗೆ ದೊಡ್ಡದಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಉತ್ಪಾದನಾ ಉದ್ಯಮಗಳಿಂದಾಗಿ ಬೆಂಗಳೂರು ಈಗ ಜಾಗತಿಕವಾಗಿ ಎಲ್ಲರೂ ಬರಬೇಕೆಂದು ಇಚ್ಚಿಸುವಂತಹ ದೊಡ್ಡ ನಗರವಾಗಿದೆ.

No comments: