Saturday, January 31, 2009

ಇದಕ್ಕೆಲ್ಲ ಯಾರು ಹೊಣೆ?

ದೇಶದೆಲ್ಲೆಡೆ ಸರಣಿ ಬಾಂಬ್ ಸ್ಫೋಟಿಸಿ ಜನರನ್ನು ಭಯಭೀತರನ್ನಾಗಿಸಿವೆ, ಕ್ರಿಶ್ಚಿಯನ್ ಮಷಿನರಿಗಳು ಮತಾಂತರ ಮಾಡುತ್ತಿದ್ದಾರೆ, ಹಿಂದೂ ಸಂಘಟನೆಗಳು ಚರ್ಚಗಳ ಮೇಲೆ ದಾಳಿ ನಡೆಸುತ್ತಿವೆ, ಗಣಿ ಮಾಲೀಕರು ಅರಣ್ಯ ಪ್ರದೇಶವನ್ನು ಲೂಟಿ ಮಾಡುತ್ತಿದ್ದಾರೆ. ಹೀಗೆ ಹಲವಾರು ರೀತಿಯ ದುರ್ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಲೇ ಇವೆ. ಇದೆಲ್ಲವನ್ನು ಗಮನಿಸಿದಾಗ ಈ ಮೇಲಿನ ಯಾವ ಸಂಗತಿಯಲ್ಲಿ ರಾಜಕೀಯವಿಲ್ಲ ಎಂದು ಹೇಳುತ್ತೀರಿ? ಇದಕ್ಕೆ ಉತ್ತರ ಅಸಾಧ್ಯವೇ ಸರಿ.

ಸದ್ಯ ಇಂತಹ ಪರಿಸ್ಥಿತಿ ನೋಡಿದರೆ ಒಂದು ಕುಟುಂಬದ ಜಗಳ ಬಗೆ ಹರಿಸಲು ರಾಜಕೀಯ ನಡೆದಿದೆ ಅಂದರೆ ಏಷ್ಟು ಕೀಳು ಮಟ್ಟದ್ದಾಗಿದೆ ಎನ್ನುವ ವಿಚಾರ ಒಂದೆಡೆಯಾದರೆ, ಇನ್ನೊಂದು ಮುಖವಾಗಿ ಈ ದೇಶವನ್ನೇ ಇಕ್ಕಟ್ಟಿನ್ಲಲ್ಲಿ ಇಡಲು ಹೊರಟು ನಿಂತಿದ್ದಾರೆ ನಮ್ಮ ರಾಜಕಾರಣಿಗಳು.ದೇಶದಲ್ಲಿ ಭಯೋತ್ಪಾದಕರ ದಾಳಿ ನಡೆದ ತಕ್ಷಣ ರಾಜಕೀಯ ಮುಖಂಡರು ಅದರ ದಮನಕ್ಕಿಂತ ಮೊದಲು ವೋಟ್ ಬ್ಯಾಂಕ್ ಗಳಿಕೆಯನ್ನು ಕ್ಷೀಣಿಸದಂತೆ ನೋಡಿಕೊಳ್ಳುತ್ತಾರೆ ವಿನಹ ಅದರ ದಮನಕ್ಕೆ ಕಠಿಣ ನಿಲುವನ್ನು ತರಲಾರರು. ವಿರೋಧ ಪಕ್ಷವು ಕೂಡಾ ಇದರ ಹೊರತಾಗಿಲ್ಲ.ದೇಶದಲ್ಲಿ ಇದೀಗ ಇಂತಹ ದಾಳಿಗಳು ದಿನೇ ದಿನೇ ಹೆಚ್ಚುತ್ತಿವೆ.ರಾಜಕೀಯ ಪಕ್ಷಗಳು ಒಂದಾಗಿ ಸೇರಿಕೊಂಡು ಇಂತಹ ಕೃತ್ಯದ ವಿರುದ್ಧ ಕಠಿಣ ಕಾನೂನು ಜಾರಿಗೆ ತರಬೇಕಾಗಿದೆ.


ದೇಶದ ಹೃದಯ ಭಾಗ ಸಂಸತ್ ಮೇಲೆ ದಾಳಿ ನಡೆಸಿ ಮರಣದಂಡನೆಗೆ ಗುರಿಯಾಗಿರುವ ದುಷ್ಟ ಅಫ್ಜಲ್‌ಗುರು ಇಂದು ಸರ್ಕಾರದ ಭದ್ರತೆಯಲ್ಲಿ ಸಕಲ ಸೌಕರ್ಯಗಳನ್ನು ಅನುಭವಿಸುತ್ತಾ ಆರಾಮವಾಗಿದ್ದಾನೆ.ಇಂತಹವರನ್ನು ಸಂರಕ್ಷಿಸುವದು ಯುಪಿಎ ಸರ್ಕಾರದ ಸರಿಯಾದ ಕ್ರಮವೇ? ಇತನಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು ಇದುವರೆಗೆ ಈತನಿಗೆ ನೇಣುಗಂಬ ತೋರಿಸಿಲ್ಲ. ಇದಕ್ಕೆ ಕಾರಣವಾದರು ಏನು? ಇದರಲ್ಲಿ ರಾಜಕೀಯ ಇದೆ.


ರಾತ್ರಿ ನೋಡಿದ ಬೆಟ್ಟ ಹಗಲು ತೆಗ್ಗು ಬಿದ್ದಿದ್ದರೆ, ದೇಶದ ಯಾವ ಮೂಲೆಯಲ್ಲಿ ಬಾಂಬ್ ಸ್ಫೋಟಿಸಿದರೆ, ಅಚ್ಚರಿ ವಿಷಯವೇನೂ ಅಲ್ಲ, ಪ್ರತಿನಿತ್ಯ ಇಂತಹ ದುರ್ಘಟನೆಗಳು ನಡೆಯುವುದು ಮಾಮುಲಾಗಿ ಬಿಟ್ಟಿದೆ ಎನ್ನುವಷ್ಟರ ಮಟ್ಟಿಗೆ ದೇಶ ಮುಂದುವರೆದಿದೆ. ಮುಂದೆ ಒಂದು ದಿನ ಗಣಿ-ಧಣಿಗಳಿಗೆ, ಭಯೋತ್ಫಾದಕರಿಗೆ ಸಡಿಲವಾದ ಕಾನೂನು ರಚಿಸುತ್ತಾರೆ, ಆದರೆ ಕಠಿಣ ನಿಲುವನ್ನು ತಾಳುವುದು ಕನಸಿನ ಮಾತೇ ಸರಿ.